ರಾಷ್ಟ್ರೀಯ ವಿದ್ಯುತ್ ಸಂರಕ್ಷಣಾ ಸಪ್ತಾಹ – 2025  – 26.06.2025 ರಿಂದ  02.07.2025 ರವರಿಗೆ
SMART ENERGY… SAFE NATION

ವಿದ್ಯುತ್ ಅಪಾಯವೇ..?!! (Is Electricity Dangerous?)

✅ ವಿದ್ಯುತ್ ಪರಿಣಾಮಗಳ ಬಗ್ಗೆ ಅರಿವಿಲ್ಲದಿರುವುದು
✅ ಬೇಜವಾಬ್ದಾರಿತನ
✅ ಅತಿಯಾದ ಆತ್ಮ ವಿಶ್ವಾಸ
✅ ಸೂಕ್ತ ಮೇಲ್ವಿಚಾರಣೆಯ  ಕೊರತೆ
✅ ಕೆಲಸಗಾರರ ಮಾನಸಿಕ ಮತ್ತು ಭೌತಿಕ ಸ್ಥಿತಿ
✅ ಅವೈಜ್ಞಾನಿಕ ವಿಧಾನಗಳ

 

ರಕ್ಷಣೆ & ಸುರಕ್ಷತೆ (Security & Safety)

ರಕ್ಷಣೆ (Security): ಉದ್ದೇಶಪೂರ್ವಕವಾಗಿ ಬರುವ ಅಪಾಯಗಳಿಂದ ರಕ್ಷಣೆ

ಸುರಕ್ಷತೆ (Safety): ಅಕಸ್ಮಾತ್ತಾಗಿ ಉಂಟಾಗುವ ಅಪಾಯಗಳಿಂದ ರಕ್ಷಣೆ

ವಿದ್ಯುತ್ ಸುರಕ್ಷತೆ (Electrical Safety)

ವಿದ್ಯುತ್ ವಿಷಯವಾಗಿ ಕಂಡುಬರುವ ಸುರಕ್ಷತಾ ಸಮಸ್ಯೆಗಳು:

ಸಾರ್ವಜನಿಕ ಸ್ಥಳಗಳಲ್ಲಿ ಅನುಸರಿಸಬೇಕಾದ ಸುರಕ್ಷತಾ ಕ್ರಮಗಳು
ಮನೆಗಳಲ್ಲಿ ಅನುಸರಿಸಬೇಕಾದ ಸುರಕ್ಷತಾ ಕ್ರಮಗಳು

 

ಸಾರ್ವಜನಿಕ ಸ್ಥಳಗಳಲ್ಲಿ ಅನುಸರಿಸಬೇಕಾದ ಸುರಕ್ಷತಾ ಕ್ರಮಗಳು:

  • ತುಂಡಾಗಿ ನೆಲದಲ್ಲಿ ಬಿದ್ದಿರುವ ತಂತಿಯಿಂದ ಕನಿಷ್ಠ 10 ಮೀಟರ್ ಅಂತರದಲ್ಲಿ ನಿಲ್ಲಬೇಕು. ಕೂಡಲೆ ವಿದ್ಯುತ್ ಸರಬರಾಜುದಾರರ ಕಚೇರಿಗೆ ವಿಷಯ ತಿಳಿಸಬೇಕು.
  • ಭೂ ಮಟ್ಟದಿಂದ ಕಡಿಮೆ ಅಂತರದಲ್ಲಿ ಬಿದ್ದಿರುವ ವಿದ್ಯುತ್ ತಂತಿಗಳನ್ನು ಮುಟ್ಟಬಾರದು.ವಿದ್ಯುತ್ ಮಾರ್ಗದ ತಂತಿಯಿಂದ 1.2 ಮೀಟರ್ ಅಂತರದಲ್ಲಿ ನಿರ್ಮಾಣ ಕಾಮಗಾರಿಗಳು ಮಾಡಬೇಕು.
  • ಒಂದು ವೇಳೆ ವಿದ್ಯುತ್ ಮಾರ್ಗಗಳ ಸಮೀಪ ಮರಗಳನ್ನು ಕತ್ತರಿಸುವಾಗ ಮರಗಳು ತಂತಿಗೆ ತಗುಲದಂತೆ ಮುನ್ನೆಚ್ಚರಿಕೆ ವಹಿಸಬೇಕು.
  • ವಿದ್ಯುತ್ ಮಾರ್ಗಗಳಿಂದ ಅಕ್ರಮವಾಗಿ ವಿದ್ಯುತ್ ಸಂಪರ್ಕವನ್ನು ತೆಗೆದುಕೊಳ್ಳಬಾರದು.
  • ಅಕ್ರಮವಾಗಿ ವಿದ್ಯುತ್ ಸಂಪರ್ಕವನ್ನು ತೆಗೆದುಕೊಳ್ಳುತ್ತಿರುವುದು ಕಂಡು ಬಂದರೆ ತಕ್ಷಣ ವಿದ್ಯುತ್ ಸರಬರಾಜುದಾರರಿಗೆ ವಿಷಯ ತಿಳಿಸುವುದು.
  • ವಿದ್ಯುತ್ ಮಾರ್ಗಗಳ ಎತ್ತರಕ್ಕಿಂತ ಹೆಚ್ಚು ಇರುವ ವಾಹನ ಎತ್ತಿನ ಗಾಡಿ ಏಣಿ ಇತರೆ ವಸ್ತುಗಳನ್ನು ವಿದ್ಯುತ್ ಮಾರ್ಗದ ಕೆಳಗೆ ತೆಗೆದುಕೊಂಡು ಹೋಗಬಾರದು.
  • ವಿದ್ಯುತ್ ಮಾರ್ಗವನ್ನು ಹೊತ್ತ ಕಂಬಗಳಿಗೆ ಜಾನುವಾರುಗಳನ್ನು ಕಟ್ಟಬಾರದು.

 ಮನೆಯಲ್ಲಿ ಅನುಸರಿಸಬೇಕಾದ ಸುರಕ್ಷತಾ ಕ್ರಮಗಳು:

  •  ವಿದ್ಯುತ್ ಅವಘಡಗಳನ್ನು ತಪ್ಪಿಸಲು ಸುರಕ್ಷತಾ ನಿಯಮಗಳನ್ನು ತಪ್ಪದೇ ಪಾಲಿಸಬೇಕು.
  • ಎಲ್ಲಾ ವಿದ್ಯುತ್ ಕಾಮಗಾರಿಗಳನ್ನು ಎಷ್ಟೇ ಚಿಕ್ಕದಿರಲಿ ಪರಿಣಿತ ವ್ಯಕ್ತಿಗಳಿಂದಲೇ ನಿರ್ವಹಿಸಬೇಕು.
  • ಭಾರತೀಯ ಗುಣಮಟ್ಟ ಸಂಸ್ಥೆಯ ಐ ಎಸ್ ಐ ಪ್ರಾಮಾಣಿಕೃತ ವಿದ್ಯುತ್ ಉಪಕರಣಗಳನ್ನು ಬಳಸಬೇಕು.
  • ಬಳಸದೆ ಇರುವ ಸಾಕೆಟ್ಗಳನ್ನು ಹಾಗೆಯೇ ಓಪನ್ ಬಿಟ್ಟಿರುವುದರಿಂದ ಮಕ್ಕಳು ಸಾಕೆಟ್ನ ನೊಳಗೆ ಕೈ ಬೆರಳು ಹೇರ್ ಪಿನ್ ಅಥವಾ ಬೇರೆ ವಸ್ತುಗಳನ್ನು ಇಡುವುದರಿಂದ ವಿದ್ಯುತ್ ಶಾಕ್ ಆಗುತ್ತದೆ, ಆದ್ದರಿಂದ ಬಳಸದೆ ಇರುವ ಸಾಕೆಟ್ ಗಳಿಗೆ ಡಮ್ಮಿ ಸುರಕ್ಷಾ ಮುಚ್ಚಳವನ್ನು ಅಳವಡಿಸಬೇಕು ಹಾಗೂ ಹಾನಿಗೊಳಗಾಗದ ವೈರ್ ನ ನಿರೋಧಕಕ್ಕೆ ಇನ್ಸುಲೇಟೆಡ್ ಟೇಪ್ ಅನ್ನು ಸುತ್ತುವುದು.

“ವಿದ್ಯುತ್ ಸುರಕ್ಷತೆ ನಮ್ಮಲ್ಲರ ಹೊಣೆ!! ಬನ್ನಿ, ಅಪಘಾತ ರಹಿತ ವಿದ್ಯುತ್ ವ್ಯವಹಾರಕ್ಕೆ ಕೈಜೋಡಿಸಿ.”

ಕರ್ನಾಟಕ ಸರ್ಕಾರ, ಇಂಧನ ಇಲಾಖೆ, ವಿದ್ಯುತ್ ಪರಿವೀಕ್ಷಣಾಲಯ.