ಪರಿಹಾರ ಘಟಕಗಳು / ವೈಶಿಷ್ಟ್ಯಗಳು @ ದಾವಣಗೆರೆ
-
ಪರಿಹಾರ ಘಟಕಗಳು / ವೈಶಿಷ್ಟ್ಯಗಳು
ಪರಿಹಾರವು ಈ ಕೆಳಗಿನ ಪ್ರಮುಖ ಅಂಶಗಳನ್ನು ಹೊಂದಿರುತ್ತದೆ
ಸಿಸಿಟಿವಿ ಕ್ಯಾಮೆರಾಗಳು
- ಕಣ್ಗಾವಲು ವ್ಯವಸ್ಥೆಯು ಸ್ಥಿರ ಬಾಕ್ಸ್ ಮತ್ತು ಪಿಟಿ ಝೆಡ್(PTZ) ಸಿಸಿಟಿವಿ ಕ್ಯಾಮೆರಾಗಳ ಸಂಯೋಜನೆಯಾಗಿರುತ್ತದೆ.
- ಪ್ರಮುಖ ಟ್ರಾಫಿಕ್ ಜಂಕ್ಷನ್‌ಗಳು ಮತ್ತು ಶಾಲೆಗಳು, ಕಾಲೇಜುಗಳು, ರೈಲ್ವೆ ನಿಲ್ದಾಣ, ಬಸ್ ಟರ್ಮಿನಲ್, ಬಸ್ ನಿಲ್ದಾಣಗಳು, ಮಾರುಕಟ್ಟೆಗಳು ಸೇರಿದಂತೆ ಇತರ ಸೂಕ್ಷ್ಮ ಸ್ಥಳಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗುವುದು.
ವೀಡಿಯೊ ನಿರ್ವಹಣಾ ವ್ಯವಸ್ಥೆ
- ವೀಡಿಯೊ ನಿರ್ವಹಣಾ ವ್ಯವಸ್ಥೆ (VMS) ಕಣ್ಗಾವಲು ವ್ಯವಸ್ಥೆಯ ಅಪ್ಲಿಕೇಶನ್ ಸಾಫ್ಟ್‌ವೇರ್ ಆಗಿದ್ದು, ಇದನ್ನು ವಿವಿಧ ಕ್ಯಾಮೆರಾಗಳಿಂದ ಪಡೆದ ವೀಡಿಯೊಗಳನ್ನು ನಿರ್ವಹಿಸಲು ಬಳಸಲಾಗುತ್ತದೆ. ಡೇಟಾ ಕೇಂದ್ರದಲ್ಲಿ ವಿ ಎಂ ಎಸ್(VMS) ಸ್ಥಾಪಿಸಲಾಗುವುದು.
- ವಿ ಎಂ ಎಸ್(VMS) ವ್ಯವಸ್ಥೆಯು ಸಿ ಸಿ ಟಿ ವಿ ಕ್ಯಾಮೆರಾ ಗಳನ್ನು ವೀಕ್ಷಿಸುವ, ಮಾರ್ಪಡಿಸುವ, ಮತ್ತು ಕಾನ್ಫಿಗರ್ ಗೊಳಿಸುವ ಸಾಮರ್ಥ್ಯ ಹೊಂದಿರುತ್ತದೆ.
ವೀಡಿಯೊ ವಿಶ್ಲೇಷಣೆ
ಸುಧಾರಿತ ವೀಡಿಯೊ ವಿಶ್ಲೇಷಣಾ ಘಟಕವು ಸಿಸಿಟಿವಿ ಕಣ್ಗಾವಲು ವ್ಯವಸ್ಥೆಯನ್ನು ಬೆಂಬಲಿಸುತ್ತದೆ. ಅದರ ಅಂಶಗಳು ಈ ಕೆಳಕಂಡಂತೆ ಇವೆ:
- ಬಹು ಕಾಲದಿಂದ ಗಮನಿಸದೆ ಇರುವ ವಸ್ತುಗಳ ಪತ್ತೆಹಚ್ಚುವಿಕೆ.
- ಅನುಮಾನಾಸ್ಪದ ವಸ್ತುಗಳ(ಗನ್, ಚಾಕು ಇತ್ಯಾದಿ.) ಪತ್ತೆಹಚ್ಚುವಿಕೆ.
- ಚಲನವಲನಗಳ/ಒಳನುಗ್ಗುವಿಕೆಯ ಪತ್ತೆಹಚ್ಚುವಿಕೆ.
- ಕ್ಯಾಮೆರಾ ವಿಧ್ವಂಸಕತೆ ಮತ್ತು ಅದನ್ನು ಒಡೆಯುವಿಕೆಯ ಪ್ರಯತ್ನವನ್ನು ಪತ್ತೆ ಹಚ್ಚುವಿಕೆ.
ಬಳಕೆದಾರರ ಸಂಪರ್ಕ /ಗ್ರಾಹಕ ನಿರ್ವಹಣಾ ವ್ಯವಸ್ಥೆ
ಬಳಕೆದಾರರ ಸಂಪರ್ಕ ವ್ಯವಸ್ಥೆಯು ಈ ಕೆಳಗಿನ ಪ್ರಮುಖ ಅಂಶಗಳನ್ನು ಹೊಂದಿರುತ್ತದೆ:
- ಕಣ್ಗಾವಲು ವ್ಯವಸ್ಥೆಯಲ್ಲಿನ ಕ್ಯಾಮೆರಾಗಳಿಂದ ನೇರವಾಗಿ ವೀಡಿಯೊವನ್ನು ವೀಕ್ಷಿಸಲಾಗುತ್ತದೆ.
- ಸಂಗ್ರಹಣೆಗಳಲ್ಲಿ ದಾಖಲಾದ ವಿಡಿಯೋಗಳನ್ನು ಶೋಧಿಸಲಾಗುತ್ತದೆ.
- ಬಹು ವೀಕ್ಷಣೆಗಳನ್ನು ರಚಿಸುವುದು ಮತ್ತು ಅವುಗಳ ನಡುವೆ ಬದಲಾಯಿಸುವುದು.
- ಆಯ್ದ ವೀಡಿಯೊವನ್ನು ವೀಕ್ಷಿಸಲಾಗುತ್ತದೆ.
ವ್ಯವಸ್ಥೆಯ ನಿರ್ವಹಣೆ
- ಕಣ್ಗಾವಲು ವ್ಯವಸ್ಥೆಯು ಎಲ್ಲಾ ಸಾಧನಗಳ, ಸರ್ವರ್‌ಗಳ ಮತ್ತು ಬಳಕೆದಾರರ ಅಂಶಗಳ ಕೇಂದ್ರೀಕೃತ ನಿರ್ವಹಣೆಯನ್ನು ಹೊಂದಿದೆ.
- ಬಹು ವಿಧಧ ಬಳಕೆದಾರರ ವ್ಯವಸ್ಥೆ ಇದಾಗಿದ್ದು ಸಿಂಗಲ್ ಸೈನ್ ಆನ್ ಮೂಲಕ ವಿವಿಧ ಬಳಕೆದಾರರಾದ ಅಡ್ಮಿನಿಸ್ಟ್ರೇಟರ್, ಸೂಪರ್ವೈಸರ್, ಆಫೀಸರ್, ಆಪರೇಟರ್ ಇತರರು ನಿರ್ವಹಿಸುತ್ತಾರೆ.
-
ಟ್ರಾಫಿಕ್ ಜಂಕ್ಷನ್ಸ್
ಕೆಳಗಿನ ಈ ಪೆಟ್ಟಿಗೆಗಳು ನಿಮ್ಮ ದೃಷ್ಟಿಯಲ್ಲಿ ಕಷ್ಟವೆನಿಸಬಹುದು. ಆದರೆ ಅವು ನಿಮ್ಮ ಸುರಕ್ಷತೆಗಾಗಿ ಇರುತ್ತವೆ.
ಪಿಟಿಝೆಡ್ ಕ್ಯಾಮೆರಾ
ಸ್ಥಿರ ಬಾಕ್ಸ್ ಕ್ಯಾಮೆರಾ
ಎಎನ್‌ಪಿಆರ್ ಬೆಂಬಲಿಸುವ ಕ್ಯಾಮೆರಾ
ಆರ್‌ಎಲ್‌ವಿಡಿಯನ್ನು ಬೆಂಬಲಿಸುವ ಕ್ಯಾಮೆರಾ
ಸಾರ್ವಜನಿಕ ಮಾಹಿತಿ ಪ್ರಸಾರ ವ್ಯವಸ್ಥೆ
ವೇರಿಯಬಲ್ ಮೆಸೇಜಿಂಗ್ ಸಿಸ್ಟಮ್
ಸಂಚಾರಿ ಕಣ್ಗಾವಲು ವಾಹನ
ವೀಡಿಯೊ ನಿರ್ವಹಣಾ ವ್ಯವಸ್ಥೆ (ವಿಎಂಎಸ್)
ವೀಡಿಯೊ ಅನಾಲಿಟಿಕ್ಸ್ (ವಿಎ)
ಕೆಂಪು ಬೆಳಕಿನ ಉಲ್ಲಂಘನೆ ಪತ್ತೆ (ಆರ್‌ಎಲ್‌ವಿಡಿ) ವ್ಯವಸ್ಥೆ
ಸ್ವಯಂಚಾಲಿತ ಸಂಖ್ಯೆ ಪ್ಲೇಟ್ ಗುರುತಿಸುವಿಕೆ (ಎಎನ್‌ಪಿಆರ್) ವ್ಯವಸ್ಥೆ
-
ವ್ಯಾಪ್ತಿ
ನಗರ ಕಣ್ಗಾವಲು ಘಟಕದ ವ್ಯಾಪ್ತಿಯನ್ನು ಕೆಳಗಿನ ಕೋಷ್ಟಕದಲ್ಲಿ ಪಟ್ಟಿ ಮಾಡಲಾಗಿದೆ.
ನಗರ ಕಣ್ಗಾವಲು ಘಟಕದ ವ್ಯಾಪ್ತಿ
-
ನಗರ ಕಣ್ಗಾವಲು
ಸಂಚಾರ ಜಂಕ್ಷನ್‌ಗಳು
- ಪಿಟಿಝೆಡ್ ಕ್ಯಾಮೆರಾಗಳು
- ಸ್ಥಿರ ಕ್ಯಾಮೆರಾಗಳು
ಇತರ ಸ್ಥಳಗಳು:
- ಪಿಟಿಝೆಡ್ ಕ್ಯಾಮೆರಾ
- ಸ್ಥಿರ ಬಾಕ್ಸ್ ಕ್ಯಾಮೆರಾ
- ವಿವಿಧ ಸ್ಥಳಗಳಲ್ಲಿ ANPR ಸೆಟಪ್‌ಗಳು
- ಪಿಟಿಝೆಡ್ ಕ್ಯಾಮೆರಾಗಳನ್ನು ಒಳಗೊಂಡ ಸಂಚಾರಿ ಕಣ್ಗಾವಲು ವಾಹನಗಳು
- ಇತರ ಘಟಕಗಳು: ಸ್ತಂಭಗಳು, ಯುಪಿಎಸ್, ನೆಟ್ವರ್ಕ್ (LAN) ಸ್ವಿಚ್, ಇತರೆ ನಿಷ್ಕ್ರಿಯ ವಸ್ತುಗಳು, ಇತ್ಯಾದಿ.
-
ನೆಟ್‌ವರ್ಕ್ ಮೂಲಸೌಕರ್ಯ
ಸಿಸಿಸಿ ಕಟ್ಟಡದಲ್ಲಿರುವ ಸರ್ವರ್ ಕೋಣೆಗೆ ವೀಡಿಯೊ ಫೀಡ್‌ಗಳನ್ನು ಕಳುಹಿಸಲು ಐಎಸ್‌ಪಿಯಿಂದ ಪ್ರತಿಯೊಂದು ಸ್ಥಳಗಳಿಗೆ ಎಂಪಿಎಲ್ಎಸ್ / ಗುತ್ತಿಗೆ ಆಧಾರಿತ ನೆಟ್ವರ್ಕ್ ಸಂಪರ್ಕ ತೆಗೆದುಕೊಳ್ಳಲಾಗುತ್ತದೆ. ಅಳವಡಿಸಿದ ಎಲ್ಲಾ ಸಾಧನಗಳಿಗಾಗಿ ನಗರ ವ್ಯಾಪ್ತಿಯೊಳಗೆ ನೆಟ್ವರ್ಕ್ ಸಂಪರ್ಕ. ಸಿಸಿಸಿ ಮತ್ತು ಉಪಗ್ರಹ ನಿಯಂತ್ರಣ ಕೊಠಡಿ ನಡುವಿನ ಸಂಪರ್ಕ
-
ಕಣ್ಗಾವಲು ಸಿಸ್ಟಮ್ ಅಪ್ಲಿಕೇಶನ್‌ಗಳು
- ವೀಡಿಯೊ ನಿರ್ವಹಣಾ ವ್ಯವಸ್ಥೆ (ವಿಎಂಎಸ್)
- ವೀಡಿಯೊ ವಿಶ್ಲೇಷಣೆ(ವಿಎ)
-
ವೀಡಿಯೊ ವಿಶ್ಲೇಷಣೆ
ಗುರುತಿಸಲಾದ ಕ್ಯಾಮೆರಾಗಳಲ್ಲಿ ನೀಡಲಾಗುವ ವಿವಿಧ ವೀಡಿಯೊ ವಿಶ್ಲೇಷಣೆಗಳು