ಸ್ಮಾರ್ಟ್ ಪಾರ್ಕಿಂಗ್

  • ಸ್ಮಾರ್ಟ್ ಪಾರ್ಕಿಂಗ್

    ಸ್ಮಾರ್ಟ್ ಪಾರ್ಕಿಂಗ್ ವ್ಯವಸ್ಥೆಯು ನಿರ್ವಹಿಸಲು ಸಂಪೂರ್ಣ ಸುಲಭ ಮತ್ತು ಬಳಸಲು ಸಂತೋಷದಾಯಕ.

ಸ್ಮಾರ್ಟ್ ಪಾರ್ಕಿಂಗನ ಮೊದಲ ಕೆಲಸ, ಪ್ರಮುಖ ರಸ್ತೆಗಳಲ್ಲಿ ವಾಹನಗಳ ಸಂಚಾರವನ್ನು ನಿಯಂತ್ರಿಸುವುದು ಮತ್ತು ಸಂಚಾರಕ್ಕೆ ಅಡ್ಡಿಯಾಗದಂತೆ ವಾಹನಗಳು ಸುಗಮವಾಗಿ ನಿಲ್ಲುವ ಸ್ಥಳವನ್ನು ಖಚಿತಪಡಿಸುವುದು ಆಗಿರುತ್ತದೆ. ದಾವಣಗೆರೆ ನಾಗರಿಕರು ಯಾವ ಪಾರ್ಕಿಂಗ್ ಸ್ಥಳಗಳು ಆಕ್ರಮಿಸಿಕೊಂಡಿವೆ ಅಥವಾ ಲಭ್ಯವಿವೆ ಎಂಬುದನ್ನು ತಿಳಿದುಕೊಳ್ಳಬಹುದು. ಇದು ನಮ್ಮ ಸ್ಮಾರ್ಟ್ ಪಾರ್ಕಿಂಗ್ ಮೊಬೈಲ್ ಅಪ್ಲಿಕೇಶನ್ ಬಳಸಿ ಖಾಲಿ ಪಾರ್ಕಿಂಗ್ ಸ್ಥಳಗಳನ್ನು ಸುಲಭವಾಗಿ ಪತ್ತೆಹಚ್ಚುವ ಮೂಲಕ ದಟ್ಟಣೆಯನ್ನು ಕಡಿಮೆ ಮಾಡುತ್ತದೆ. ಇದರಿಂದಾಗಿ ವಿಚಲಿತ ಚಾಲನೆಯ ಅಪಾಯವನ್ನು ಕಡಿಮೆ ಮಾಡುತ್ತದೆ ಮತ್ತು ವಾಹನ ನಿಲುಗಡೆ ಪ್ರಕ್ರಿಯೆಯನ್ನು ವೇಗವಾಗಿ ಮಾಡುವ ಮೂಲಕ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡುತ್ತದೆ. ನೈಜ-ಸಮಯದ ಪಾರ್ಕಿಂಗ್ ಆಯ್ಕೆಗಳನ್ನು ನೋಡುವ ಸಾಮರ್ಥ್ಯವು ನಾಗರಿಕರು ವಾಹನ ನಿಲುಗಡೆಗೆ ಸ್ಥಳವನ್ನು ಹುಡುಕುವ ಒತ್ತಡ ಮತ್ತು ಅನಿರೀಕ್ಷಿತತೆಯನ್ನು ಕಡಿಮೆ ಮಾಡುತ್ತದೆ. ಸುಲಭವಾದ ಸಂಚಾರವು ದಾವಣಗೆರೆ ನಾಗರಿಕರ ಜೀವನ ಮಟ್ಟವನ್ನು ಹೆಚ್ಚು ಸುಧಾರಿಸುತ್ತದೆ .