ಪ್ರದೇಶ ಆಧಾರಿತ ಅಭಿವೃದ್ಧಿ

ಪ್ರಸ್ತಾವಿತ ಹಳೆಯ ಬಸ್ ನಿಲ್ದಾಣದ ಪುನರಾಭಿವೃದ್ಧಿ

  • ನೆಲಮಾಳಿಗೆಯ ಮಹಡಿ:
  • 63 ಕಾರು ಅಥವಾ ನಾಲ್ಕು ವೀಲರ್ ಪಾರ್ಕಿಂಗ್ ವ್ಯವಸ್ಥೆ
  • 95 ದ್ವಿಚಕ್ರ ವಾಹನ ನಿಲುಗಡೆಗೆ ವ್ಯವಸ್ಥೆ
  • ನೆಲ ಮಹಡಿಯಲ್ಲಿ:
  • 12 ಬಸ್ಸುಗಳು ನಿಲ್ಲುವ ವ್ಯವಸ್ಥೆ
  • ಶೌಚಾಲಯಗಳೊಂದಿಗೆ ಪ್ರಯಾಣಿಕರ ತಂಗುದಾಣ
  • ಮಧ್ಯದ ಮಹಡಿ: ಶೌಚಾಲಯ ಸೌಲಭ್ಯದೊಂದಿಗೆ ತಂಗುದಾಣ
  • ವಿಶಿಷ್ಟ ಮೊದಲ ಮತ್ತು ಎರಡನೇ ಮಹಡಿ: ಚಿಲ್ಲರೆ ಅಂಗಡಿ ಮತ್ತು ಕಚೇರಿ

ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣ ಪುನರಾಭಿವೃದ್ಧಿ

  • ಒಟ್ಟು ವಿಸ್ತೀರ್ಣ-30166 ಚದರ ಮೀ.
  • ನೆಲಮಾಳಿಗೆ- ಪಾರ್ಕಿಂಗ್
  • ನೆಲ ಮಹಡಿ- ಬಸ್ ಟರ್ಮಿನಲ್, ಮಾಲ್, ಕೆ ಎಸ್ ಆರ್ ಟಿ ಸಿ ಲೌಂಜ್
  • ಮಧ್ಯದ ಮಹಡಿ- ರೆಸ್ಟೋರೆಂಟ್‌ಗಳು
  • ಮೊದಲ, ಎರಡನೇ ಮತ್ತು ಮೂರನೇ ಮಹಡಿ- ಮಾಲ್ ಮತ್ತು ಕೆಎಸ್‌ಆರ್‌ಟಿಸಿ ಕಚೇರಿಗಳು. ವಸತಿ ನಿಲಯ ಇತ್ಯಾದಿ.

ಜಗಳೂರು ಬಸ್ ನಿಲ್ದಾಣಕ್ಕೆ ಬಸ್ ಟರ್ಮಿನಲ್ ಅನ್ನು ಒದಗಿಸುವುದು

  • ನೆಲ ಮಹಡಿ- ಬಸ್ ನಿಲುಗಡೆ ಮತ್ತು ಇತರ ಸೌಲಭ್ಯಗಳು
  • ಶೌಚಾಲಯಗಳು ಮತ್ತು ವಿಶ್ರಾಂತಿ ಕೊಠಡಿಗಳು ಮತ್ತು ಹೋಟೆಲ್‌ಗಳು

ಸೌಕರ್ಯ ಕೇಂದ್ರ

  • ನೆಲ ಮಹಡಿ- 900 ಚದರ ಮೀ ಪ್ರದೇಶದಲ್ಲಿ ಲಾಬಿ, ಫಂಕ್ಷನ್ ಹಾಲ್, ಚೇಂಜ್ ರೂಮ್, ಗ್ರೀನ್ ರೂಮ್, ಅಂಗವಿಕಲ ಶೌಚಾಲಯಗಳು ಸೇರಿವೆ.
  • ಮೊದಲ ಮಹಡಿ-700 ಚದರ ಮೀ ಪ್ರದೇಶದಲ್ಲಿ ವಸತಿ ನಿಲಯ, ಕಿಚನ್, ಬಾಲ್ಕನಿ, ಶೌಚಾಲಯಗಳು, ಅತಿಥಿ ಕೊಠಡಿ ಇತ್ಯಾದಿಗಳು ಸೇರಿವೆ.

ಬಾಷಾನಗರದ ಎಬಿಡಿ ಏರಿಯಾದಲ್ಲಿ ಹೆರಿಗೆ ಆಸ್ಪತ್ರೆ

  • ನೆಲ ಮಹಡಿ-ಆಪರೇಷನ್ ಥಿಯೇಟರ್, ಲೇಬರ್ ರೂಮ್ ಮತ್ತು ವೈದ್ಯರ ಕೊಠಡಿ.
  • ಮೊದಲ ಮಹಡಿ- ವಾರ್ಡ್ ಕೊಠಡಿಗಳು ಮತ್ತು ನರ್ಸಿಂಗ್ ಕೇಂದ್ರ.

ಮಾಗನಹಳ್ಳಿ ರಸ್ತೆಯ ಉರ್ದು ಶಾಲೆ ಸುಧಾರಣೆ

  • ನೆಲ ಮಹಡಿ- ಶಾಲಾ ಕೊಠಡಿಗಳು ಮತ್ತು ಶೌಚಾಲಯಗಳು.
  • ಮೊದಲ ಮಹಡಿ- ಕಚೇರಿ ಕೊಠಡಿಗಳು ಮತ್ತು ಶೌಚಾಲಯಗಳು.
  • ಇತರ ಸುಧಾರಣೆ- ಅಸ್ತಿತ್ವದಲ್ಲಿರುವ ಕಟ್ಟಡಗಳಿಗೆ ವಾಟರ್ ಪ್ರೂಫಿಂಗ್, ಬಾಗಿಲುಗಳ ಪುನಃಸ್ಥಾಪನೆ ಮತ್ತು ಕಿಟಕಿಗಳು, ಬಣ್ಣ ಇತ್ಯಾದಿ.

ಹಳೆಯ ಬಸ್ ನಿಲ್ದಾಣದ ಸ್ಥಳಾಂತರ

  • ತಾತ್ಕಾಲಿಕವಾಗಿ ಖಾಸಗಿ ಬಸ್ಸುಗಳ ನಿಲುಗಡೆಗೆ ಸ್ಥಳ ಮತ್ತು ಮಾರಾಟಗಾರರಿಗೆ ಅಂಗಡಿಗಳ ವ್ಯವಸ್ಥೆ.
  • ಬಸ್ ನಿಲ್ದಾಣಕ್ಕಾಗಿ ಪಾರ್ಕಿಂಗ್, ರೆಸ್ಟ್ ರೂಮ್, ಟಾಯ್ಲೆಟ್, ವೇಟಿಂಗ್ ಏರಿಯಾ, ನೀರು ಸರಬರಾಜು ಮುಂತಾದ ಮೂಲ ಸೌಲಭ್ಯಗಳನ್ನು ಒದಗಿಸುವುದು.

ಮಂಡಿಪೇಟೆ ಪ್ರದೇಶ-ಸ್ಮಾರ್ಟ್ ರಸ್ತೆಗಳ ಆರ್ಥಿಕ ಪುನರುಜ್ಜೀವನ

  • 6 ಸ್ಮಾರ್ಟ್ ರಸ್ತೆಗಳು.
  • ಸ್ಮಾರ್ಟ್ ರಸ್ತೆಗಳು: ಮಂಡಿಪೇಟೆ ರಸ್ತೆ, ಚೌಕಿಪೇಟೆ ರಸ್ತೆ, ಚಾಮರಾಜಪೇಟೆ ರಸ್ತೆ, ಎಂಜಿ ರಸ್ತೆ, ಬಿನ್ನಿ ಕಂಪನಿ ರಸ್ತೆ, ಕೆ.ಆರ್ ಮಾರುಕಟ್ಟೆ ರಸ್ತೆ.
  • ಚರಂಡಿಗಳು ಮತ್ತು ಫುಟ್‌ಪಾತ್‌ಗಳ ಸುಧಾರಣೆ : ಕೆ.ಆರ್.ನಿಂದ ಎಚ್‌ಸಿ ರಸ್ತೆ, ಎನ್‌ಆರ್ ರಸ್ತೆ.
  • ಯೋಜನೆಯ ಪ್ರಮುಖ ಮುಖ್ಯಾಂಶಗಳು:
    1. ಸಿಸಿ ಪೇವ್ಮೆಂಟ್
    2. ಯುಟಿಲಿಟಿ
    3. ನೀರು ಸರಬರಾಜು
    4. ಯುಜಿಡಿ
    5. ಮಳೆ ನೀರು/ಹರಿವ ನೀರು ಇಂಗುವಿಕೆ
    6. ಎಲ್ಇಡಿ ಬೀದಿ ದೀಪಗಳು

ಮಂಡಿಪೇಟೆ ಸ್ಮಾರ್ಟ್ ರೋಡ್ ಕಾಮಗಾರಿ ಪೂರ್ಣಗೊಂಡಿದೆ

  • ಸ್ಥಿತಿ: 8 ಒಟ್ಟು ಉದ್ದ -510 ಮೀ. ಪಿಕ್ಯೂಸಿ(PQC) ಕೆಲಸ 495 ಮೀ. ಎಸ್‌ಡಬ್ಲ್ಯುಡಿ(SWD) ಮತ್ತು ಯುಜಿಡಿ(UGD) ಕೆಲಸ ಪೂರ್ಣಗೊಂಡಿದೆ. 395 ಮೀ ರಸ್ತೆಯ ಇಕ್ಕೆಲಗಳಲ್ಲಿ ಯುಟಿಲಿಟಿ ನಾಳಗಳು ಪೂರ್ಣಗೊಂಡಿವೆ. ಫುಟ್‌ಪಾತ್ ಮತ್ತು ಮನೆ ಸೇವಾ ಸಂಗ್ರಹ ಕೊಠಡಿ(house service collection chamber) ನಿರ್ಮಾಣ ಪೂರ್ಣಗೊಂಡಿದೆ.

ಚೌಕಿಪೇಟೆ ಸ್ಮಾರ್ಟ್ ರಸ್ತೆ ಕಾಮಗಾರಿ ಪೂರ್ಣಗೊಂಡಿದೆ

ಎಂಜಿ ರೋಡ್ ಸ್ಮಾರ್ಟ್ ರೋಡ್ ಕಾಮಗಾರಿ ಪೂರ್ಣಗೊಂಡಿದೆ

  • ಒಟ್ಟು ಉದ್ದ – 416 ಮೀ. ಪಿಕ್ಯೂಸಿ(PCQ) 0 ರಿಂದ 410 ಮೀ ವರೆಗೆ ಪೂರ್ಣಗೊಂಡಿದೆ. ನೀರು ಸರಬರಾಜು ಮತ್ತು ಗ್ಯಾಸ್‌ಲೈನ್ 385 ಮೀ ಪೂರ್ಣಗೊಂಡಿದೆ. ಫುಟ್‌ಪಾತ್ ಮತ್ತು ಮನೆ ಸೇವಾ ಸಂಗ್ರಹ ಕೊಠಡಿ(house service collection chamber) ನಿರ್ಮಾಣ ಪೂರ್ಣಗೊಂಡಿದೆ.

ಎಬಿಡಿ ಪ್ರದೇಶದಲ್ಲಿ ಪ್ರಮುಖ ಮಳೆ ನೀರು ಇಂಗಿಸುವ ಚರಂಡಿ

  • ಸ್ಥಿತಿ: ಸಂಖ್ಯೆ 1 ರಿಂದ 6 ಯೋಜನೆಗಳಿಗೆ 80% ಕೆಲಸ ಪೂರ್ಣಗೊಂಡಿದೆ

ಪ್ರಮುಖ ಮಳೆ ನೀರು ಇಂಗಿಸುವ ಚರಂಡಿಗಳು

ಎಬಿಡಿ ಪ್ರದೇಶವಾದ ಕೊಂಡಜ್ಜಿ ರಸ್ತೆಯಲ್ಲಿ ಮಳೆ ನೀರು ಇಂಗಿಸುವ ಚರಂಡಿಗಳ ಪುನರ್ನಿರ್ಮಾಣ. ಡ್ರೈನ್ ಸಂಖ್ಯೆ: ಡಿ 1, ಡಿ 1 ಎ, ಡಿ 2, ಡಿ 3, ಡಿ 5 ಮತ್ತು ಡಿ 6

ಪ್ರಮುಖ ಮಳೆ ನೀರು ಇಂಗಿಸುವ ಚರಂಡಿಗಳು

ಎಬಿಡಿ ಪ್ರದೇಶವಾದ ಕೊಂಡಜ್ಜಿ ರಸ್ತೆಯಲ್ಲಿ ಮಳೆ ನೀರು ಇಂಗಿಸುವ ಚರಂಡಿಗಳ ಪುನರ್ನಿರ್ಮಾಣ. ಡ್ರೈನ್ ಸಂಖ್ಯೆ: ಡಿ 4 ಎ ಮತ್ತು ಡಿ 4 ಬಿ

ಪ್ರಮುಖ ಮಳೆ ನೀರು ಇಂಗಿಸುವ ಚರಂಡಿಗಳು

ಎಬಿಡಿ ಪ್ರದೇಶವಾದ ಮೀನು ಮಾರುಕಟ್ಟೆ ಮುಂದಿನಿಂದ ಮಾಗನಹಳ್ಳಿ ಹಳ್ಳದವರೆಗೆ ಮಳೆ ನೀರು ಇಂಗಿಸುವ ಚರಂಡಿಗಳ ಪುನರ್ನಿರ್ಮಾಣ. ಡ್ರೈನ್ ಸಂಖ್ಯೆ: ಡಿ13, ಡಿ14 & ಡಿ15

ದ್ವಿತೀಯ ಮಳೆ ನೀರು ಇಂಗಿಸುವ ಚರಂಡಿಗಳು

ದುರ್ಗಾಂಬಿಕಾ ದೇವಾಲಯದ ಸುತ್ತಲೂ ಮಳೆ ನೀರು ಇಂಗಿಸುವ ಚರಂಡಿಗಳ ಪುನರ್ನಿರ್ಮಾಣ

  • ಒಟ್ಟು ಉದ್ದ – 4.9 ಕಿ.ಮೀ. 1000 ಮೀ ರಾಫ್ಟ್(Raft) ಮತ್ತು ಗೋಡೆ ಪೂರ್ಣಗೊಂಡಿದೆ.

ಸ್ಮಾರ್ಟಇ-ಶೌಚಾಲಯಗಳು

  • ಇಡೀ ದಾವಣಗೆರೆ ನಗರದ ವಿವಿಧ ಉದ್ಯಾನವನಗಳು ಮತ್ತು ಸಾರ್ವಜನಿಕ ಪ್ರದೇಶಗಳಲ್ಲಿ ಸ್ಮಾರ್ಟ್ ಇ-ಶೌಚಾಲಯಗಳನ್ನು ಸ್ಥಾಪಿಸುವ ಯೋಜನೆಯನ್ನು ಪ್ರಸ್ತಾಪಿಸಲಾಗಿದೆ.
  • ಹಂತ 1: 9 ಉದ್ಯಾನವನಗಳಲ್ಲಿ ಅನುಸ್ಥಾಪನೆಯನ್ನು ಪ್ರಸ್ತಾಪಿಸಲಾಗಿದೆ.
  • ಹಂತ 2: 31 ಸ್ಥಳಗಳನ್ನು ಸ್ಥಾಪನೆಗೆ ಗುರುತಿಸಲಾಗಿದೆ.

ಜಂಕ್ಷನ್‌ಗಳ ಅಥವಾ ವೃತ್ತಗಳ ಸುಧಾರಣೆ

  • ಹಂತ 1 – 9 ಜಂಕ್ಷನ್‌ಗಳು, ಹಂತ 2: 4 ಜಂಕ್ಷನ್‌ಗಳು.
  • ಪರಿಗಣಿಸಲಾದ ಘಟಕಗಳು: ಕಾಲುದಾರಿ, ಮಳೆ ನೀರು ಇಂಗಿಸುವ ಒಳಚರಂಡಿ, ಪಾದಚಾರಿಗಳು ನಿಲ್ಲುವ ಸ್ಥಳ, ರಸ್ತೆ ಪಟ್ಟಿಗಳು, ಸಂಕೇತ ಮತ್ತು ಸುರಕ್ಷತಾ ಕ್ರಮಗಳು, ಬೆಳಕು.
  • ಜಂಕ್ಷನ್‌ಗಳನ್ನು ನಗರಾದ್ಯಂತ(Pan-city wide) ಪರಿಗಣಿಸಲಾಗುತ್ತದೆ.

ಸಮಗ್ರ ಕಸದ ಬುಟ್ಟಿ ರಹಿತ ಘನತ್ಯಾಜ್ಯ ನಿರ್ವಹಣಾ ವ್ಯವಸ್ಥೆ


ಕೆಲಸದ ವ್ಯಾಪ್ತಿ ಮತ್ತು ಕಾರ್ಯ

  1. ಮನೆಯ ಮಟ್ಟದಲ್ಲಿ ಮೂಲ ವಿಭಜನೆ.
  2. ತ್ಯಾಜ್ಯ ಪ್ರಮಾಣ ಮತ್ತು ಗುಣಲಕ್ಷಣ.
  3. ಮನೆ ಮನೆಗೆ ತೆರಳಿ ಪ್ರಾಥಮಿಕ ಸಂಗ್ರಹ.
  4. ದ್ವಿತೀಯ ಸಂಗ್ರಹದಿಂದ ವಿಲೇವಾರಿ ಸ್ಥಳಕ್ಕೆ ಘನ ತ್ಯಾಜ್ಯ ಸಾಗಣೆ.
  5. ತ್ಯಾಜ್ಯ ಸಂಸ್ಕರಣೆ ಮತ್ತು ವಿಲೇವಾರಿ.
  6. ಪರಿಣಾಮಕಾರಿ SWM ಮಾನಿಟರಿಂಗ್‌ಗಾಗಿ ಡಿಜಿಟಲ್ ಪರಿಹಾರಗಳು.
  7. ಎಫ್‌ಐಡಿ (FID)ಆಧಾರಿತ ತ್ಯಾಜ್ಯ ಸಂಗ್ರಹಣೆ ಮತ್ತು ಸಾರಿಗೆಯ ಮಾನಿಟರಿಂಗ್.

ಹೊಂಡದ ಸರ್ಕಲ್ ಬಳಿ ಕಲ್ಯಾಣಿ ಅಭಿವೃದ್ಧಿ ಮತ್ತು ಗಡಿಯಾರ ಗೋಪುರ(ಗಡಿಯಾರ ಕಂಬ)

  • ಹೊಂಡದ ಸರ್ಕಲ್ ಬಳಿ ನಿಷ್ಕ್ರಿಯ ವಾಟರ್ ಟ್ಯಾಂಕ್ / ಕಲ್ಯಾಣಿ ಅಸ್ತಿತ್ವದಲ್ಲಿದೆ , ಇದು ದುರ್ಗಾಂಬಿಕಾ ದೇವಾಲಯದ ಇತಿಹಾಸದಲ್ಲಿ ಸಾಂಸ್ಕೃತಿಕ ಮಹತ್ವವನ್ನು ಹೊಂದಿದೆ, ಇದನ್ನು ನಗರ ಮಟ್ಟದ ಮನರಂಜನಾ ಪ್ರದೇಶವನ್ನಾಗಿ ಪುನರಾಭಿವೃದ್ಧಿ ಪಡಿಸಲು ಯೋಜನೆ ರೂಪಿಸಲಾಗಿದೆ

  • ಗಡಿಯಾರ ಗೋಪುರ (ಕ್ಲಾಕ್ ಟವರ್) ವನ್ನು ಸಾರ್ವಜನಿಕ ವ್ಯಾಪಾರ-ವಹಿವಾಟು ಕೇಂದ್ರ ಎಂದು ಪರಿಗಣಿಸಲಾಗಿದೆ, ಅದು ಅದರ ಪಾರಂಪರಿಕ ಪಾತ್ರವನ್ನು ಹೆಚ್ಚಿಸುತ್ತದೆ ಮತ್ತು ನಗರ ಮಟ್ಟದ ವ್ಯಾಪಾರ-ವಹಿವಾಟು ಕೇಂದ್ರವಾಗಿ ಮತ್ತು ಮುಕ್ತ ಸ್ಥಳವಾಗಿ ನಗರಕ್ಕೆ ಗುರುತನ್ನು ತರುತ್ತದೆ.

24 × 7 ದಾವಣಗೆರೆ ನಗರದ ನೀರು ಸರಬರಾಜಿಗಾಗಿ ತುಂಗಭದ್ರಾ ನದಿಯ ಅಡ್ಡಲಾಗಿ ಬ್ಯಾರೇಜ್ ನಿರ್ಮಾಣ

  • ಸ್ಥಳ: ರಾಜನಹಳ್ಳಿಯ ಹತ್ತಿರ , ತುಂಗಭದ್ರಾ ನದಿಗೆ ಅಡ್ಡಲಾಗಿ.
  • ಶೇಖರಣಾ ಸಾಮರ್ಥ್ಯ: 0.20 ಟಿಎಂಸಿ.
  • ಗೇಟ್‌ಗಳ ರೀತಿ: ಸ್ವಯಂಚಾಲಿತ ಫಾಲಿಂಗ್ ಗೇಟ್‌ಗಳು.
  • ಬ್ಯಾರೇಜಿನ ಉದ್ದ: 550 ಮೀ.

ಪಾರ್ಕ್‌ಗಳಲ್ಲಿ ಜಿಮ್ ಮತ್ತು ಆಟದ ಉಪಕರಣಗಳು

  • ಒಟ್ಟು ಘಟಕಗಳು – 14 ಉದ್ಯಾನವನಗಳು

ಸಂಕೇತ ಮತ್ತು ರಸ್ತೆ ಸುರಕ್ಷತೆ ಆಡಿಟ್ ಸ್ಥಾಪನೆ