ವಾತಾವರಣ ಸಂವೇದಕಗಳು


Location: —

Date/Time:–

Temperature

Humidity

Noise Level


Good
Satisfactory
Moderate

Poor
Very Poor
Severe

Category (Range) PM 10 PM 2.5 NO2 O3 CO SO2 CO2 AQI Temperature Humidity Noise level LUX UV
Good 0-50 0-30 0-40 0-50 0-1.0 0-40 0-700 0-50  10-40 0-50 0-40 100-1000 0-4
Satisfactory 51-100 31-60 41-80 51-100 1.1-2.0 41-80 701-1000 51-100 41-50 51-80 41-80 1001-5000 4.1-5
Moderate 101-250 61-90 81-180 101-168 2.1-10 41-380 1001-1500 101-200 51-60 81-90 81-90 5001-15000 5.1-7
Poor 251-350 91-120 181-280 169-208 10–17 381-800 1501-2500 201-300 61-70 91-100 91-110 15001-20000 7.1-9
Very poor 351-430 121-250 281-400 209-748 17-34 801-1600 2501-5000 301-400 71-80 101 + 111-140 20001-75000 9.1-10
Severe 431 + 251 + 400 + 749 + 34 + 1600 + 5001 + 401-500 81-100+ 141-180 75001-120,000 10+

ವಾತಾವರಣ ಸಂವೇದಕಗಳು

ವಾತಾವರಣದಲ್ಲಿನ ಕಣಗಳು, ಅನಿಲಗಳು, ಶಬ್ದ, ಬೆಳಕು, ಹವಾಮಾನ ಮುಂತಾದ ವಿವಿಧ ಪರಿಸರ ನಿಯತಾಂಕಗಳನ್ನು ಕಂಡುಹಿಡಿಯಲು ಮತ್ತು ಅಳೆಯಲು ವಾತಾವರಣ ಸಂವೇದಕಗಳನ್ನು ನಿಖರವಾದ ಸಂವೇದನಾ ವ್ಯವಸ್ಥೆಯಿಂದ ಸಕ್ರಿಯಗೊಳಿಸಲಾಗಿದೆ. ಐಒಟಿ(IoT) ತಂತ್ರಜ್ಞಾನವಾಗಿರುವ ಇದು ವಿವಿಧ ತಂತಿ / ತಂತಿರಹಿತ ಸಂವಹನ ವಿಧಾನಗಳನ್ನು ಬಳಸಿಕೊಂಡು ಕೇಂದ್ರ ಸರ್ವರ್ ವ್ಯವಸ್ಥೆಗೆ ನೈಜ-ಸಮಯದ ಡೇಟಾವನ್ನು ತಲುಪಿಸುತ್ತದೆ.

ನಗರದ ಐಒಟಿ(IoT) ಆಧಾರಿತ ವಾತಾವರಣ ಸಂವೇದಕಗಳು ಸಮಗ್ರ, ಸುಧಾರಿತ ವ್ಯವಸ್ಥೆಗಳಾಗಿದ್ದು, ದತ್ತಾಂಶದೊಂದಿಗೆ ಒಳಗೊಂಡಿರುವ ಅನೇಕ ಕಾರ್ಯಗಳನ್ನು ನಿರ್ವಹಿಸುವ ಮತ್ತು ನಗರದ ವಾತಾವರಣದ ಗುಣಮಟ್ಟವನ್ನು ಸುಧಾರಿಸುವ ಗುರಿಯನ್ನು ಹೊಂದಿದೆ. ಇದು ವಾತಾವರಣವನ್ನು ಗಮನಿಸುವ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಇದು ಜನರು, ಪ್ರಾಣಿಗಳು ಮತ್ತು ಸಸ್ಯಗಳ ಮೇಲೆ ವಾತಾವರಣದ ಬದಲಾವಣೆಯು ಬೀರುವ ಪರಿಣಾಮಗಳ ಗಮನಿಸುವಿಕೆಯನ್ನು ಒಳಗೊಂಡಿದೆ. ಗಾಳಿಯ ಗುಣಮಟ್ಟ, ಶುಷ್ಕತೆ, ತೇವಾಂಶ, ಭೂಕಂಪಗಳು, ಪ್ರವಾಹ, ಸುನಾಮಿಗಳು, ಭೂಕುಸಿತಗಳು, ಹಸಿರು ಜಾಗ ಮತ್ತು ಪರಿಸರದ ಮೇಲೆ ಜೀವವೈವಿಧ್ಯತೆಗಳನ್ನು ಸರಿಯಾಗಿ ನಿರ್ವಹಿಸುವುದರ ಮೂಲಕ ಭೂಮಿಯ ಮೇಲಿನ ಮಾಲಿನ್ಯವು ಬದಲಾಗುತ್ತದೆ.

ದಾವಣಗೆರೆ ನಗರದ 5 ಸ್ಥಳಗಳಲ್ಲಿ ಪರಿಸರ ಸಂವೇದಕಗಳನ್ನು ಅಳವಡಿಸಲಾಗಿದೆ:

1.ಮಂಡಕ್ಕಿ ಭಟ್ಟಿ
2.ಡಿಸಿ ಸರ್ಕಲ್
3.ಈರುಳ್ಳಿ ಮಾರುಕಟ್ಟೆ
4.ಲಕ್ಷ್ಮಿ ಫ್ಲೋರ್ ಮಿಲ್
5.ಕೆಆರ್ ಮಾರುಕಟ್ಟೆ

ವಾತಾವರಣ ಸಂವೇದಕ ನಿಯತಾಂಕಗಳನ್ನು ವೀಕ್ಷಿಸಲು ದೊಡ್ಡ ಎಲ್ಇಡಿ ಪರದೆಯಲ್ಲಿ ಪ್ರದರ್ಶನ

ನಗರದ ವೆಬ್ಸೈಟ್, ಮೊಬೈಲ್ ಅಪ್ಲಿಕೇಶನ್ ಮತ್ತು ಎಲ್ಇಡಿ ಪರದೆಯಲ್ಲಿ ಪ್ರದರ್ಶನದ ಮೂಲಕ ಗಾಳಿಯ ಗುಣಮಟ್ಟದ ನಿಯತಾಂಕಗಳ ಮಾಹಿತಿಯ ನೈಜ-ಸಮಯದ ಸ್ಥಿತಿಯನ್ನು ನೇರಪ್ರಸಾರ ಪಡಿಸಲಾಗುತ್ತದೆ. ಈ ದತ್ತಾಂಶಗಳನ್ನು ಸುಲಭವಾಗಿ ಅರ್ಥ ಮಾಡಿಕೊಳ್ಳುವ ಸಲುವಾಗಿ ಪಠ್ಯ, ಬಣ್ಣದ ಸಂಕೇತಗಳನ್ನು ಒಳಗೊಂಡ ನಕ್ಷೆಗಳು, ಚಿತ್ರಗಳು ಇತ್ಯಾದಿಗಳ ಮೂಲಕ ಪ್ರದರ್ಶಿಸುವ ಸಾಮರ್ಥ್ಯ ಹೊಂದಿರುತ್ತದೆ.