ಇಂಟೆಲಿಜೆಂಟ್ ಸಂಚಾರ ನಿರ್ವಹಣಾ ವ್ಯವಸ್ಥೆ

  • ಇಂಟೆಲಿಜೆಂಟ್ ಸಂಚಾರ ನಿರ್ವಹಣಾ ವ್ಯವಸ್ಥೆ

ಜನರ ಸುರಕ್ಷತೆಗಾಗಿ ಸಂಚಾರ ನಿಯಮಗಳನ್ನು ಜಾರಿಗೊಳಿಸಲು ರಸ್ತೆಗಳಲ್ಲಿ ವಾಹನಗಳ ಚಲನೆಯನ್ನು ಪತ್ತೆಹಚ್ಚಲು, ನಿಯಂತ್ರಿಸಲು ಮತ್ತು ವಿಶ್ಲೇಷಿಸಲು ಹಸ್ತಚಾಲಿತ ಪ್ರಕ್ರಿಯೆಯನ್ನು ಬದಲಾಯಿಸಲು ಇಂಟೆಲಿಜೆಂಟ್ ಸಂಚಾರ ನಿರ್ವಹಣಾ ವ್ಯವಸ್ಥೆಯನ್ನು ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ. ಇದು ಸಂಚಾರ ಯೋಜಕರು ಮತ್ತು ಸಂಚಾರ ಕಾನೂನು ಜಾರಿ ಮಾಡುವ ಸಂಸ್ಥೆಗಳಾದ ರಾಜ್ಯ ಸಂಚಾರ ಪೊಲೀಸ್ ಮತ್ತು ಸಂಚಾರ ನಿಯಂತ್ರಣ ಮತ್ತು ನಿರ್ವಹಣಾ ಸಂಸ್ಥೆಗಳಿಗೆ ನಿಜವಾದ ನಿರ್ಧಾರ ಬೆಂಬಲ ವ್ಯವಸ್ಥೆ (decision support system)ಯಾಗಿ ಕಾರ್ಯನಿರ್ವಹಿಸುತ್ತದೆ.

ಎಟಿಸಿಎಸ್ – ಅಡಾಪ್ಟಿವ್ ಟ್ರಾಫಿಕ್ ಕಂಟ್ರೋಲ್ ಸಿಸ್ಟಮ್

ಅಡಾಪ್ಟಿವ್ ಟ್ರಾಫಿಕ್ ಕಂಟ್ರೋಲ್ ಸಿಸ್ಟಮ್ (ಎಟಿಸಿಎಸ್) ಜಂಕ್ಷನ್‌ಗಳನ್ನು ಒಳಗೊಂಡ ವ್ಯಾಖ್ಯಾನಿತ ಅಧ್ಯಯನ ಪ್ರದೇಶದಲ್ಲಿ ಟ್ರಾಫಿಕ್ ಹರಿವುಗಳು, ವಾಹನ ಚಲನೆಗಳು ಮತ್ತು ಕ್ಯೂಗಳು ಮತ್ತು ಸಂಪೂರ್ಣ ಪ್ರಾಥಮಿಕ ರಸ್ತೆ ಸಾರಿಗೆ ಜಾಲದ ಉದ್ದಕ್ಕೂ ತಿರುಗುವಿಕೆಯನ್ನು ಲೆಕ್ಕಾಚಾರ ಮಾಡುವ ಸಾಮರ್ಥ್ಯದೊಂದಿಗೆ ಸಿಮ್ಯುಲೇಶನ್ ಆಧಾರಿತ ನೈಜ ಸಮಯದ ಟ್ರಾಫಿಕ್ ಫ್ಲೋ ಮಾಡೆಲಿಂಗ್ ಸಾಮರ್ಥ್ಯವನ್ನು ಒದಗಿಸುತ್ತದೆ.

ಪ್ರಸ್ತಾವಿತ ಪರಿಹಾರವು ವಾಹನಗಳನ್ನು ಪತ್ತೆಹಚ್ಚಲು ಮತ್ತು ವಾಹನದಟ್ಟಣೆ ನಿರ್ಣಯಿಸಲು ಜಂಕ್ಷನ್‌ಗಳಲ್ಲಿ ರಾಡಾರ್ ಆಧಾರಿತ ಸಂವೇದಕಗಳನ್ನು ಹೊಂದಿದೆ, ಇದು ಜಂಕ್ಷನ್‌ಗಳಲ್ಲಿ ಸ್ಥಳೀಯವಾಗಿ ಸ್ಥಾಪಿಸಲಾದ ನಿಯಂತ್ರಕಗಳಿಗೆ ಮಾಹಿತಿಯನ್ನು ರವಾನಿಸುತ್ತದೆ. ಎಲ್ಲಾ ಸ್ಥಳೀಯ ನಿಯಂತ್ರಕಗಳು ನಿಯಂತ್ರಣ ಕೊಠಡಿಯಲ್ಲಿ ಸರ್ವರ್‌ನಲ್ಲಿ ಸ್ಥಾಪಿಸಲಾದ ಸಾಫ್ಟ್‌ವೇರ್‌ಗೆ ಲಿಂಕ್ ಆಗುತ್ತವೆ, ಇದು ಎಲ್ಲಾ ಜಂಕ್ಷನ್‌ಗಳ ಅಥವಾ ವೃತ್ತಗಳ ನಡುವೆ ನೈಜ ಸಮಯದ ಆಧಾರದ ಮೇಲೆ ಸಮನ್ವಯವನ್ನು ತರುತ್ತದೆ.

ಪ್ರಸ್ತಾವಿತ ಪರಿಹಾರವು ಎಂಬೆಡೆಡ್ ತಂತ್ರಜ್ಞಾನದ ಜೊತೆಗೆ ಸಂವೇದಕ ನೆಟ್‌ವರ್ಕ್‌ಗಳನ್ನು ಬಳಸುತ್ತದೆ. ರಸ್ತೆಯ ಪ್ರತಿ ತಿರುವಿನಲ್ಲಿ ಕೆಂಪು ಮತ್ತು ಹಸಿರು ದೀಪಗಳ ಸಮಯವನ್ನು ಪಕ್ಕದ ಎಲ್ಲಾ ರಸ್ತೆಗಳ ದಟ್ಟಣೆಯನ್ನು ಪರಿಗಣಿಸಿ ಬುದ್ಧಿವಂತಿಕೆಯಿಂದ ನಿರ್ಧರಿಸಲಾಗುತ್ತದೆ. ಹೀಗಾಗಿ, ಟ್ರಾಫಿಕ್ ಲೈಟ್ ಸ್ವಿಚಿಂಗ್‌ನ ಆಪ್ಟಿಮೈಸೇಶನ್ ರಸ್ತೆ ಸಾಮರ್ಥ್ಯ ಮತ್ತು ಸಂಚಾರದ ಹರಿವನ್ನು ಹೆಚ್ಚಿಸುತ್ತದೆ ಮತ್ತು ಸಂಚಾರ ದಟ್ಟಣೆಯನ್ನು ತಡೆಯುತ್ತದೆ. ಬುದ್ಧಿವಂತ ಟ್ರಾಫಿಕ್ ಲೈಟ್ ನಿಯಂತ್ರಕದ ಕಾರ್ಯಕ್ಷಮತೆ ಸಾಂಪ್ರದಾಯಿಕ ನಿಯಂತ್ರಕಕ್ಕಿಂತ ಕಡಿಮೆ ಸಮಯ ಕಾಯುವಂತೆ ಮಾಡುತ್ತದೆ, ಸರಾಸರಿಯಾಗಿ ಅಂದಾಜಿಸಿದಾಗ ವಾಹನಗಳು ಹೆಚ್ಚು ದೂರ ಪ್ರಯಾಣಿಸುತ್ತವೆ ಮತ್ತು ತುರ್ತು ಸಂದರ್ಭದಲ್ಲಿ ದಕ್ಷ ಕಾರ್ಯಾಚರಣೆಗಾಗಿ ಈ ವ್ಯವಸ್ಥೆ ಹೆಚ್ಚು ಪರಿಣಾಮಕಾರಿಯಾಗಿದೆ.

ಉದ್ದೇಶಿತ ಎಟಿಸಿಎಸ್‌ನ ಪ್ರಮುಖ ಅಂಶಗಳು ಈ ಕೆಳಗಿನಂತಿವೆ:

  • ವಾಹನ ಪತ್ತೆಹಚ್ಚುವಿಕೆ
  • ಸಂವಹನ ನೆಟ್‌ವರ್ಕ್
  • ಕೇಂದ್ರ ನಿಯಂತ್ರಣ ವ್ಯವಸ್ಥೆ

ಹೆಚ್ಚುವರಿಯಾಗಿ, ಎಟಿಸಿಎಸ್ ಅನ್ನು ಈ ಕೆಳಗಿನ ಉಪ-ಘಟಕಗಳು ಬೆಂಬಲಿಸುತ್ತವೆ:

  • ಸೆಂಟ್ರಲ್ ಸರ್ವರ್
  • ಸಂವಹನ ನೆಟ್‌ವರ್ಕ್
  • ರಾಡಾರ್ ಆಧಾರಿತ ಸಂವೇದಕ
  • ಕೇಂದ್ರ ಅಪ್ಲಿಕೇಶನ್ ಸರ್ವರ್
  • ಕ್ಯಾಂಟಿಲಿವರ್ ಸ್ತಂಭಗಳು ಮತ್ತು ಪ್ರಮಾಣಿತ ಸ್ತಂಭಗಳು
  • ಸಿಗ್ನಲ್ ಅಂಶಗಳು
  • ಕೌಂಟ್ಡೌನ್ ಟೈಮರ್ಗಳು
  • ಸೌರ ವಿದ್ಯುತ್ ಬ್ಯಾಕಪ್

ಸಂಚಾರ ಜಾರಿ ವ್ಯವಸ್ಥೆ

ಸಂಚಾರ ಜಾರಿ ವ್ಯವಸ್ಥೆಗಳು ಸ್ವಯಂಚಾಲಿತ ಅಥವಾ ಅರೆ-ಸ್ವಯಂಚಾಲಿತ ವ್ಯವಸ್ಥೆಗಳಾಗಿದ್ದು, ಅದರ ಮೂಲಕ ಸಂಚಾರ ಉಲ್ಲಂಘನೆಗಳನ್ನು ಸೆರೆಹಿಡಿಯಲಾಗುತ್ತದೆ ಜೊತೆಗೆ ಚಲನ್‌ಗಳನ್ನು ಪಡೆಯಬಹುದು. ಟ್ರಾಫಿಕ್ ನಿಯಮಗಳಿಗೆ ಅನುಸರಣೆ ಹೆಚ್ಚಿಸಲು ಮತ್ತು ಸಂಚಾರ ಜಾರಿ ಚಟುವಟಿಕೆಗಳಲ್ಲಿ ಮಾನವಸಹಿತ ನಿರ್ವಹಣೆ ಕಡಿಮೆ ಮಾಡಲು ಇದು ಸಹಾಯ ಮಾಡುತ್ತದೆ.

ಸಂಚಾರ ಉಲ್ಲಂಘನೆ ಪತ್ತೆ ವ್ಯವಸ್ಥೆಯು ಈ ಕೆಳಗಿನ ಪರಿಹಾರಗಳನ್ನು ಹೊಂದಿರುತ್ತದೆ:

  • ಎಎನ್‌ಪಿಆರ್ – ಸ್ವಯಂಚಾಲಿತ ಸಂಖ್ಯೆ ಪ್ಲೇಟ್ ಗುರುತಿಸುವಿಕೆ
  • ಆರ್‌ಎಲ್‌ವಿಡಿ – ಕೆಂಪು-ದೀಪದ ಉಲ್ಲಂಘನೆ ಪತ್ತೆ
  • ಎಸ್‌ವಿಡಿ – ವೇಗ ಉಲ್ಲಂಘನೆ ಪತ್ತೆ
  • ಇ- ಚಲನ್

ಇದು ಏನು ಮಾಡುತ್ತದೆ ಅಂದರೆ…

ಇಂಟೆಲಿಜೆಂಟ್ ಮಾನಿಟರಿಂಗ್ ಸಿಸ್ಟಮ್ (ಐಟಿಎಂಎಸ್) ಕ್ಯಾಮೆರಾ ಎಫ್‌ಒವಿ(ವೀಕ್ಷಣಾ ಕ್ಷೇತ್ರ) ಯಲ್ಲಿ ಪರವಾನಗಿ ಫಲಕಗಳನ್ನು (ಇದರ ಮೂಲಕ ವಾಹನಗಳನ್ನು) ಪತ್ತೆ ಮಾಡುತ್ತದೆ ಮತ್ತು ಅವುಗಳನ್ನು ಡೇಟಾಬೇಸ್‌ನಲ್ಲಿ ಸಂಗ್ರಹಿಸುತ್ತದೆ.

  • ಎಫ್‌ಒವಿ ಒಳಗೆ ವಾಹನದ ಪಥ.
  • ವಾಹನದ ಬಣ್ಣ (ಸಂಖ್ಯಾ ಫಲಕದ ಸುತ್ತ).
  • ವಾಹನದ ಚಿತ್ರ ಮತ್ತು ಪರವಾನಗಿ ಫಲಕದ ಚಿತ್ರ.
  • ಸಿಗ್ನಲ್ ಸ್ಥಿತಿ: ಅದು ಹಸಿರು ಅಥವಾ ಕೆಂಪು ಆಗಿರಲಿ.

ಈ ಮಾಹಿತಿಯಿಂದ ವಿವಿಧ “ಘಟನೆಗಳನ್ನು” ಉತ್ಪಾದಿಸುತ್ತದೆ, ಉದಾ. ಎಎನ್‌ಪಿಆರ್, ಆರ್‌ಎಲ್‌ವಿಡಿ, ನಿಷೇಧಿತ ದಾರಿಯಲ್ಲಿ ಚಲನೆ ಇತ್ಯಾದಿ.

ಇದನ್ನು ಎಲ್ಲಿ ಬಳಸಬಹುದು

  • ಪರವಾನಗಿ ಸಂಖ್ಯೆಗಳ ಪಡೆಯಲು, ಭವಿಷ್ಯದ ಹುಡುಕಾಟಕ್ಕಾಗಿ ಮತ್ತು ವರದಿಗಳನ್ನು ತಯಾರಿಸಲು.
  • ಕೆಂಪು ದೀಪದ ಉಲ್ಲಂಘನೆ ಪತ್ತೆ (ಮತ್ತೊಂದು ಸಂಬಂಧಿತ ಕ್ಯಾಮೆರಾದೊಂದಿಗೆ).
  • ನಿಷೇಧಿತ ರಸ್ತೆಯಲ್ಲಿ ಚಲನೆ ಪತ್ತೆ.
  • ಪಟ್ಟಿ ಮಾಡಲಾದ ವಾಹನಗಳ ಪತ್ತೆ (ಶಂಕಿತ, ಕದ್ದ, ಬೇಕಾದ).
  • ಸಂಚಾರ ನಿಯಮಗಳ ಉಲ್ಲಂಘನೆಯ ವಿರುದ್ಧ ಇ-ಚಲನ್ ತಯಾರಿಸುವಿಕೆ(ಆರ್‌ಎಲ್‌ವಿಡಿ, ನಿಷೇಧಿತ ದಾರಿಯಲ್ಲಿ ಸಂಚಾರ, ಇತ್ಯಾದಿ)
ಎಎನ್‌ಪಿಆರ್ – ಸ್ವಯಂಚಾಲಿತ ಸಂಖ್ಯೆ ಪ್ಲೇಟ್ ಗುರುತಿಸುವಿಕೆ

ಎಎನ್‌ಪಿಆರ್ ಕ್ಯಾಮೆರಾಗಳು ತಮ್ಮ ಸಂಗ್ರಹಣೆಯನ್ನು ಕಮಾಂಡ್ & ಕಂಟ್ರೋಲ್ ಕೇಂದ್ರಕ್ಕೆ ಒದಗಿಸುತ್ತದೆ, ಅಲ್ಲಿ ಎಎನ್‌ಪಿಆರ್ ಸರ್ವರ್ ಇರುತ್ತದೆ. ಎಎನ್‌ಪಿಆರ್ ಸರ್ವರ್ ವಾಹನದ ನೋಂದಣಿ ಸಂಖ್ಯೆಯನ್ನು ಹೆಚ್ಚಿನ ನಿಖರತೆಯೊಂದಿಗೆ ಪಡೆಯಲು ಒಸಿಆರ್(OCR) ಸಾಫ್ಟ್‌ವೇರ್ ಬಳಸಿ ಚಿತ್ರವನ್ನು ಪ್ರಕ್ರಿಯೆಗೊಳಿಸುತ್ತದೆ. ಅಕ್ಷರ ಮತ್ತು ಸಂಖ್ಯೆಗಳನ್ನು ಒಳಗೊಂಡ ನಂಬರ್ ಪ್ಲೇಟ್‌ನ ಚಿತ್ರವನ್ನು ಕಂಡುಹಿಡಿದು, ಅದನ್ನು ಪಠ್ಯ ರೂಪದಲ್ಲಿ ಪಡೆಯಲು ಸಹಾಯವಾಗುತ್ತದೆ. ಈ ರೀತಿ ಪಡೆದ ವಾಹನ ಸಂಖ್ಯೆಗಳನ್ನು ಅಡ್ಡ ಪರಿಶೀಲಿಸುವ ಮೂಲಕ ಕದ್ದ / ಶಂಕಿತ ವಾಹನಗಳನ್ನು ಗುರುತಿಸಲು ವ್ಯವಸ್ಥೆಗೆ ಸಾಧ್ಯವಾಗುತ್ತದೆ. ಎಎನ್‌ಪಿಆರ್ ಸಾಫ್ಟ್‌ವೇರ್ ಅನ್ನು ವೀಡಿಯೊ ನಿರ್ವಹಣಾ ವ್ಯವಸ್ಥೆಯೊಂದಿಗೆ ಸಹ ಸಂಯೋಜಿಸಲಾಗುವುದು.

ಆರ್‌ಎಲ್‌ವಿಡಿ – ಕೆಂಪು ದೀಪದ ಉಲ್ಲಂಘನೆ ಪತ್ತೆ

ರೆಡ್ ಲೈಟ್ ಉಲ್ಲಂಘನೆ ಪತ್ತೆ (ಆರ್‌ಎಲ್‌ವಿಡಿ) ವ್ಯವಸ್ಥೆಯು ಟ್ರಾಫಿಕ್ ಲೈಟ್ ಕೆಂಪು ಬಣ್ಣದಲ್ಲಿದ್ದರೆ ಜಂಕ್ಷನ್‌ನಲ್ಲಿ ವಾಹನ ನಿಲ್ಲಿಸಲು ಹಾಕಿದ ಗೆರೆಗಳನ್ನು ದಾಟಿದ ಗಾಡಿಗಳ ವಿವರಗಳನ್ನು ಸೆರೆಹಿಡಿಯುವ ವ್ಯವಸ್ಥೆಯಾಗಿದೆ. ಪುರಾವೆ ಕ್ಯಾಮೆರಾ ಘಟಕಗಳು ಮತ್ತು ಇತರ ಸಲಕರಣೆಗಳ ಮೂಲಕ ಕೆಂಪು ದೀಪವನ್ನು ಸ್ವಯಂಚಾಲಿತವಾಗಿ ಕಂಡುಹಿಡಿಯಲು ಸಿಸ್ಟಮ್‌ಗೆ ಸಾಧ್ಯವಾಗುತ್ತದೆ. ಹೀಗೆ ಸೆರೆಹಿಡಿಯಲಾದ ಮಾಹಿತಿಯನ್ನು ಉಲ್ಲಂಘಿಸುವವರಿಗೆ ಚಲನ್‌ಗಳನ್ನು ನೀಡಲು ಬಳಸಲಾಗುತ್ತದೆ.

ಎಸ್‌ವಿಡಿ – ವೇಗ ಉಲ್ಲಂಘನೆ ಪತ್ತೆ

ನಿರ್ದಿಷ್ಟ ರಸ್ತೆ ವಿಭಾಗಕ್ಕೆ ನಿಗದಿತ ವೇಗ ಮಿತಿಯನ್ನು ಉಲ್ಲಂಘಿಸುವ ವಾಹನಗಳನ್ನು ಸ್ವಯಂಚಾಲಿತವಾಗಿ ಪತ್ತೆಹಚ್ಚಲು ಮತ್ತು ಸೆರೆಹಿಡಿಯಲು ಎಸ್‌ವಿಡಿ ವ್ಯವಸ್ಥೆಯನ್ನು ಬಳಸಲಾಗುತ್ತದೆ. ವಾಹನದ ವೇಗ, ಅಧಿಸೂಚಿತ ವೇಗ ಮಿತಿ, ದಿನಾಂಕ, ಸಮಯ, ಸ್ಥಳ ಮತ್ತು ವಾಹನದ ನೋಂದಣಿ ಸಂಖ್ಯೆಯಂತಹ ಸಂಬಂಧಿತ ಉಲ್ಲಂಘನ ದತ್ತಾಂಶದೊಂದಿಗೆ ಯಾವುದೇ ಸಮಯದಲ್ಲಿ ವಿವಿಧ ರಸ್ತೆಗಳಲ್ಲಿ ಏಕಕಾಲದಲ್ಲಿ ಅನೇಕ ಉಲ್ಲಂಘಿಸುವ ವಾಹನಗಳನ್ನು ಸೆರೆಹಿಡಿಯುವ ಸಾಮರ್ಥ್ಯವನ್ನು ಈ ವ್ಯವಸ್ಥೆಯು ಹೊಂದಿರುತ್ತದೆ. ಈ ಡೇಟಾವನ್ನು ಹೆಚ್ಚಿನ ಪ್ರಕ್ರಿಯೆಗಾಗಿ ಇ-ಚಲನ್ ವ್ಯವಸ್ಥೆಗೆ ವರ್ಗಾಯಿಸಲಾಗುತ್ತದೆ, ಇದರ ಮೂಲಕ ಉಲ್ಲಂಘಿಸುವ ವಾಹನದ ಮಾಲೀಕತ್ವದ ವಿವರಗಳನ್ನು ಪತ್ತೆಹಚ್ಚುವುದು ಮತ್ತು ನೋಟಿಸ್ / ಚಲನ್‌ಗಳನ್ನು ಮುದ್ರಿಸುವುದು.

ಇ-ಚಲನ್

ಕೇಂದ್ರ ನಿಯಂತ್ರಣ ಕೊಠಡಿಯಲ್ಲಿ ಇ-ಚಲನ್ ಘಟಕವನ್ನು ಸಂಯೋಜಿಸಲಾಗಿದೆ. ಪ್ರತಿ ಕೆಂಪುದೀಪದ ಉಲ್ಲಂಘನೆ ಘಟನೆ / ವೇಗ ಪತ್ತೆ ಘಟನೆಯನ್ನು ಇ-ಚಲನ್ ಘಟಕದ ಮೂಲಕ ಪ್ರಕ್ರಿಯೆಗೊಳಿಸಲಾಗುತ್ತದೆ. ಇ-ಚಲನ್ ವ್ಯವಸ್ಥೆಯನ್ನು ಆರ್‌ಟಿಒ ದತ್ತಸಂಚಯದೊಂದಿಗೆ ಸಂಯೋಜಿಸಲಾಗುವುದು ಇದರ ಸಹಾಯದಿಂದ ಉಲ್ಲಂಘಿಸುವ ವಾಹನದ ಮಾಲೀಕರ ವಿವರಗಳನ್ನು ಪಡೆಯುತ್ತದೆ. ಉಲ್ಲಂಘನೆಯ ದಿನಾಂಕ / ಸಮಯ, ಉಲ್ಲಂಘನೆಯ ಸ್ಥಳ, ಒಸಿಆರ್‌ನೊಂದಿಗೆ ನಂಬರ್ ಪ್ಲೇಟ್ ಚಿತ್ರ ಮತ್ತು ಅನನ್ಯ ಚಲನ್ ಐಡಿಯೊಂದಿಗೆ ಸಂಬಂಧಿಸಿದ ಪುರಾವೆ ಚಿತ್ರಗಳಂತಹ ಉಲ್ಲಂಘನೆಯ ಎಲ್ಲಾ ವಿವರಗಳನ್ನು ಚಲನ್ ಹೊಂದಿರಬೇಕು.

ಸಂದೇಶ ಬದಲಾಯಿಸಬಹುದಾದ ಪ್ರದರ್ಶನ ಫಲಕಗಳು

ಸಂದೇಶ ಬದಲಾಯಿಸಬಹುದಾದ ಪ್ರದರ್ಶನ ಫಲಕಗಳನ್ನು ನಗರದ ನಿರ್ದಿಷ್ಟ ಸ್ಥಳಗಳಲ್ಲಿ ಪ್ರದರ್ಶಿಸಲಾಗುತ್ತದೆ. ಸಂದೇಶ ಬದಲಾಯಿಸಬಹುದಾದ ಪ್ರದರ್ಶನ ವ್ಯವಸ್ಥೆಯು ಕ್ರಿಯಾತ್ಮಕ ಸಂಚಾರ ನಿರ್ವಹಣಾ ವ್ಯವಸ್ಥೆಯ ಪ್ರಮುಖ ಅಂಶವಾಗಿರುತ್ತದೆ. ನಗರಗಳ ಹೆದ್ದಾರಿಗಳು, ಎಕ್ಸ್‌ಪ್ರೆಸ್ ಹೆದ್ದಾರಿಗಳು ಮತ್ತು ಪ್ರಮುಖ ರಸ್ತೆಗಳಲ್ಲಿ ವಾಹನ ಚಾಲಕರಿಗೆ ಮಾರ್ಗ / ಮರುಹೊಂದಿಸುವ ಮಾಹಿತಿ, ಎಚ್ಚರಿಕೆಗಳು (ಅಪಘಾತಗಳು, ದಟ್ಟಣೆಗಳು), ಟೋಲ್ ದರಗಳು ಮತ್ತು ವಿಶೇಷ ಮಾಹಿತಿಯನ್ನು ಪ್ರದರ್ಶಿಸುವ ಮೂಲಕ ವಿಎಂಎಸ್ ಮಾಹಿತಿ, ಎಚ್ಚರಿಕೆ ಮತ್ತು ಮಾರ್ಗದರ್ಶನ ನೀಡುತ್ತದೆ.

ವಿಎಂಎಸ್ ನ ಕ್ರಿಯಾತ್ಮಕ ನಿಯತಾಂಕಗಳ ಅವಲೋಕನವನ್ನು ಕೆಳಗೆ ನೀಡಲಾಗಿದೆ:

  • ಪಠ್ಯ ಮತ್ತು ಗ್ರಾಫಿಕ್ ಸಂದೇಶಗಳನ್ನು ಪ್ರದರ್ಶಿಸುತ್ತದೆ.
  • ಪಠ್ಯ ಸಂದೇಶಗಳು ಇಂಗ್ಲಿಷ್, ಹಿಂದಿ ಮತ್ತು ಕನ್ನಡ ಭಾಷೆಗಳಲ್ಲಿ ಪ್ರದರ್ಶಿಸಲು ಸಾಧ್ಯವಾಗುತ್ತದೆ.
  • ಪಠ್ಯ ಸಂದೇಶಗಳ ಮೂಲಕ ಚಾಲಕರಿಗೆ ಮಾರ್ಗದರ್ಶನ, ಮಾಹಿತಿ ಮತ್ತು ಎಚ್ಚರಿಕೆ ನೀಡುವ ಡೈನಾಮಿಕ್ ಪ್ರದರ್ಶನ.
  • ಸಾಮಾನ್ಯ ವಿಎಂಎಸ್ ಸಂದೇಶಗಳು
  1. ರಸ್ತೆ ಸ್ಥಿತಿ
  2. ಅಪಘಾತಗಳ ಬಗ್ಗೆ ಮಾಹಿತಿ
  3. ಸುರಕ್ಷತೆ ಮತ್ತು ಸಾಮಾಜಿಕ ಕಲ್ಯಾಣ ಸಂದೇಶಗಳು
  4. ಸಂಚಾರಕ್ಕೆ ಮಾರ್ಗದರ್ಶನ
  5. ಜಾಹೀರಾತು

ಸಾರ್ವಜನಿಕ ಮಾಹಿತಿ ಪ್ರಸಾರ ವ್ಯವಸ್ಥೆ (ಪಿಎಎಸ್)

ಸಾರ್ವಜನಿಕ ಮಾಹಿತಿ ಪ್ರಸಾರ ವ್ಯವಸ್ಥೆಯು ಸ್ಮಾರ್ಟ್ ಸಿಟಿ ಮಿಷನ್‌ನ ಭಾಗವಾಗಿ ಅತ್ಯಗತ್ಯ ಅಂಶವಾಗಿದೆ, ಏಕೆಂದರೆ ಇದು ಸಾರ್ವಜನಿಕ ಸ್ಥಳಗಳಲ್ಲಿ ಮಾಹಿತಿಯನ್ನು ಪ್ರಸಾರ ಮಾಡಲು ಪ್ರಮುಖ ಪಾತ್ರ ವಹಿಸುತ್ತದೆ. ಸಾರ್ವಜನಿಕ ಪ್ರಕಟಣೆಗಳು ನಾಗರಿಕರಿಗೆ ಮತ್ತು ರಸ್ತೆ ಬಳಕೆದಾರರಿಗೆ ನಗರದ ಕುರಿತು ಜಾಗೃತಿ ಹೆಚ್ಚಿಸಲು ಮತ್ತು ಸೇವೆಯ ವಿಳಂಬ ಮತ್ತು ತುರ್ತು ಸಂದರ್ಭಗಳಲ್ಲಿ ಉಪಯುಕ್ತ ಮಾಹಿತಿಯನ್ನು ನೀಡಲು ಸಹಾಯ ಮಾಡುತ್ತದೆ. ಸಂಚಾರ ಪರಿಸ್ಥಿತಿಗಳು, ರಸ್ತೆ ಅಪಘಾತಗಳು, ರಸ್ತೆ ಪರಿಸ್ಥಿತಿಗಳು ಮುಂತಾದ ಪ್ರಮುಖ ಸಂದರ್ಭೋಚಿತ ಮಾಹಿತಿಯನ್ನು ನೇರವಾಗಿ ವಿತರಿಸುವಲ್ಲಿ ಅಥವಾ ಸಾರ್ವಜನಿಕ ಹಿತಾಸಕ್ತಿಗೆ ಒಳಪಡುವ ಯಾವುದೇ ಮಾಹಿತಿಯನ್ನು ಪ್ರಸಾರಪಡಿಸುವಲ್ಲಿ ನಗರ ಆಡಳಿತಗಾರರ ಕೈಯಲ್ಲಿ ಇದು ಒಂದು ಪ್ರಮುಖ ಸಾಧನವಾಗಿದೆ.

ಸಾರ್ವಜನಿಕ ಮಾಹಿತಿ ಪ್ರಸಾರ ವ್ಯವಸ್ಥೆ (ಪಿಎ ಸಿಸ್ಟಮ್) ಎನ್ನುವುದು ಎಲೆಕ್ಟ್ರಾನಿಕ್ ಸೌಂಡ್ ಆಂಪ್ಲಿಫಿಕೇಷನ್ ಮತ್ತು ವಿತರಣಾ ವ್ಯವಸ್ಥೆಯಾಗಿದ್ದು, ಮೈಕ್ರೊಫೋನ್, ಆಂಪ್ಲಿಫಯರ್ ಮತ್ತು ಧ್ವನಿವರ್ಧಕಗಳನ್ನು ಹೊಂದಿದೆ, ಇದನ್ನು ಒಬ್ಬ ವ್ಯಕ್ತಿಯು ಸಾರ್ವಜನಿಕರ ದೊಡ್ಡ ಸಮೂಹವನ್ನು ಉದ್ದೇಶಿಸಿ ಮಾತನಾಡಲು ಬಳಸಲಾಗುತ್ತದೆ.

ಸಾರ್ವಜನಿಕ ಮಾಹಿತಿ ಪ್ರಸಾರ ವ್ಯವಸ್ಥೆಯ ಕ್ರಿಯಾತ್ಮಕ ನಿಯತಾಂಕಗಳ ಅವಲೋಕನವನ್ನು ಕೆಳಗೆ ನೀಡಲಾಗಿದೆ:

  • ಎಲ್ಲಾ ಅಥವಾ ನಿರ್ದಿಷ್ಟ ಧ್ವನಿವರ್ಧಕಗಳಿಗೆ CCC ಯಿಂದ ಏಕಮುಖ ಪ್ರಕಟಣೆ.
  • ಎಲ್ಲಾ ಅಥವಾ ನಿರ್ದಿಷ್ಟ ಧ್ವನಿವರ್ಧಕಗಳಿಗೆ ತುರ್ತು / ಪೂರ್ವ-ಮುದ್ರಿತ ಸಂದೇಶಗಳನ್ನು ಪ್ರಕಟಣೆಗಾಗಿ ರವಾನಿಸುವುದು.